ವೈಶಿಷ್ಟ್ಯವಾಗಿರುವುದು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಐಎಂಡಿಬಿಯಲ್ಲಿ ಅತೀ ಹೆಚ್ಚು ರೇಟಿಂಗ್ ಇರುವ ಪುನೀತ್ ರಾಜ್ ಕುಮಾರ್ ಚಿತ್ರ ಯಾವುದು ಗೊತ್ತಾ?!
ಐಎಂಡಿಬಿಯಲ್ಲಿ ಪುನೀತ್ ರಾಜ್ ಕುಮಾರ್ ನಟಿಸಿರುವ ಟಾಪ್ ರೇಟಿಂಗ್ ಸಿನಿಮಾಗಳ ಪಟ್ಟಿ ಇಲ್ಲಿದೆ.
1. ರಾಜಕುಮಾರ2017ರಲ್ಲಿ ತೆರೆ ಕಂಡಿರುವ ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರ ಐಎಂಡಿಬಿಯಲ್ಲಿ ಪುನೀತ್ ಚಿತ್ರಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದೆ. ಆ್ಯಕ್ಷನ್, ಡ್ರಾಮಾ ಸಿನಿಮಾಗಳ ಸಾಲಿನಲ್ಲಿ ಬರುವ ರಾಜಕುಮಾರ ಚಿತ್ರಕ್ಕೆ ಐಎಂಡಿಬಿಯಲ್ಲಿ 8.1 ರೇಟಿಂಗ್ ಇದೆ. ಸಂತೋಷ್ ಆನಂದ್ರಾಮ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ.
2. ಮಿಲನಪುನೀತ್ ಅಭಿನಯದ ಚಿತ್ರಗಳಲ್ಲಿ ಬಹು ಮೆಚ್ಚುಗೆ ಪಡೆದ ಚಿತ್ರವೆಂದರೆ ಅದು ಮಿಲನ ಚಿತ್ರ. ರೊಮ್ಯಾನ್ಸ್ ಸಿನಿಮಾಗಳ ಸಾಲಿನಲ್ಲಿರುವ ಈ ಸಾಂಸಾರಿಕ ಚಿತ್ರ 2007ರಲ್ಲಿ ತೆರೆ ಕಂಡಿತ್ತು. ಈ ಚಿತ್ರಕ್ಕೂ ಕೂಡ ಐಎಂಡಿಬಿಯಲ್ಲಿ 8.1 ರೇಟಿಂಗ್ ಇದೆ. ಪ್ರಕಾಶ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪಾರ್ವತಿ ಮೆನನ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.
3. ಅರಸು
ವಿಭಿನ್ನ ಕಥೆ ಹೊಂದಿರುವ ಅರಸು ಚಿತ್ರ ಯಶಸ್ವಿ ಪ್ರದರ್ಶನ ಕಂಡಿತ್ತು. ಮಹೇಶ್ ಬಾಬು ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಮೀರಾ ಜಾಸ್ಮಿನ್, ರಮ್ಯ ನಾಯಕಿಯರಾಗಿ ನಟಿಸಿದ್ದರು. ಈ ಚಿತ್ರ ಡ್ರಾಮಾ ಸಿನಿಮಾಗಳ ಸಾಲಿನಲ್ಲಿದ್ದು, 2007ರಲ್ಲಿ ತೆರೆ ಕಂಡಿತ್ತು. ಈ ಚಿತ್ರಕ್ಕೆ ಐಎಂಡಿಬಿಯಲ್ಲಿ 7.5 ರೇಟಿಂಗ್ ಇದೆ.
4. ಹುಡುಗರು
ಪುನೀತ್ ರಾಜ್ ಕುಮಾರ್, ಶ್ರೀನಗರ ಕಿಟ್ಟಿ, ಯೋಗೇಶ್ ಮತ್ತು ರಾಧಿಕಾ ಪಂಡಿತ್ ನಟಿಸಿದ್ದ ಆ್ಯಕ್ಷನ್, ಡ್ರಾಮಾ ಚಿತ್ರ ‘ಹುಡುಗರು’ ಯುವ ಸಮುದಾಯದ ಮೆಚ್ಚುಗೆಗೆ ಪಾತ್ರವಾಗಿತ್ತು. 2011ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವನ್ನು ಕೆ ಮಾದೇಶ್ ನಿರ್ದೇಶಿಸಿದ್ದರು. ಐಎಂಡಿಬಿಯಲ್ಲಿ ಈ ಚಿತ್ರಕ್ಕೆ 7.5 ರೇಟಿಂಗ್ ಇದೆ.
ಎಂ ಸರವಣನ್ ನಿರ್ದೇಶನದ ಚಿಕ್ರವ್ಯೂಹ ಚಿತ್ರ 2016ರಲ್ಲಿ ತೆರೆ ಕಂಡಿತ್ತು. ರಚಿತ ರಾಮ್ ನಾಯಕಿಯಾಗಿ ನಟಿಸಿದ್ದ ಈ ಚಿತ್ರಕ್ಕೆ ಐಎಂಡಿಬಿಯಲ್ಲಿ 7.1 ರೇಟಿಂಗ್ ಇದೆ.
6. ರಣವಿಕ್ರಮ
2015ರಲ್ಲಿ ಬಿಡುಗಡೆಯಾಗಿದ್ದ ರಣವಿಕ್ರಮ ಚಿತ್ರ ಕೂಡ ಯಶಸ್ವಿಯಾಗಿತ್ತು. ಪವನ್ ಒಡೆಯರ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಅದಾ ಶರ್ಮಾ ನಾಯಕಿ ಪಾತ್ರದಲ್ಲಿ ನಟಿಸಿದ್ದರು. ಐಎಂಡಿಬಿಯಲ್ಲಿ ಈ ಚಿತ್ರಕ್ಕೆ 6.6 ರೇಟಿಂಗ್ ಇದೆ.
7. ಅಭಿ
ಬಾಲ ನಟನೆಯ ಬಳಿಕ ಬೆಳೆದ ಅಪ್ಪು ಅವರು ನಾಯಕರಾಗಿ ನಟಿಸಿದ್ದ ಎರಡನೇ ಚಿತ್ರ ಅಭಿ. 2003ರಲ್ಲಿಈ ಚಿತ್ರ ತೆರೆ ಕಂಡಿತ್ತು. ದಿನೇಶ್ ಬಾಬು ನಿರ್ದೇಶನದಲ್ಲಿರುವ ಈ ಚಿತ್ರದಲ್ಲಿ ರಮ್ಯ ಮುಖ್ಯ ನಟಿಯಾಗಿ ಅಭಿನಯಿಸಿದ್ದರು. ಐಎಂಡಿಬಿಯಲ್ಲಿ ಈ ಚಿತ್ರಕ್ಕೆ 8.1 ರೇಟಿಂಗ್ ಇದೆ.
8. ಮೈತ್ರಿ
ಗಿರಿರಾಜ್ ಬಿಎಂ ನಿರ್ದೇಶಿಸಿರುವ ಮೈತ್ರಿ ಚಿತ್ರ 2015ರಲ್ಲಿ ತೆರೆ ಕಂಡಿತ್ತು. ಪುನೀತ್ ಇದರಲ್ಲಿ ಅತಿಥಿ ಪಾತ್ರದಲ್ಲಿ ಗಮನ ಸೆಳೆದಿದ್ದರು. ಮಲಯಾಳಂನ ಮೇರು ನಟ ಮೋಹನ್ ಲಾಲ್ ಕೂಡ ನಟಿಸಿದ್ದ ಈ ಚಿತ್ರಕ್ಕೆ ಐಎಂಡಿಬಿಯಲ್ಲಿ 7.4 ರೇಟಿಂಗ್ ಇದೆ.
9. ಬೆಟ್ಟದ ಹೂವು
ಬಾಲ ನಟನಾಗಿದ್ದಾಗ ಪುನೀತ್ ಗೆ ಹೆಚ್ಚು ಹೆಸರು ತಂದುಕೊಟ್ಟಿದ್ದ ಸಿನಿಮಾ ಬೆಟ್ಟದ ಹೂವು. ಎನ್ ಲಕ್ಷ್ಮೀನಾರಾಯಣ ಅವರು ನಿರ್ದೇಶಿಸಿದ್ದ ಈ ಚಿತ್ರ 1985ರಲ್ಲಿ ತೆರೆಕಂಡು ಯಶಸ್ವಿಯಾಗಿತ್ತು. ಈ ಚಿತ್ರಕ್ಕೆ ಐಎಂಡಿಬಿಯಲ್ಲಿ 8 ರೇಟಿಂಗ್ ಇದೆ.
10. ಜಾಕಿ
ಸೂರಿ ನಿರ್ದೇಶನದ ಜಾಕಿ ಚಿತ್ರ 2010ರಲ್ಲಿ ತೆರೆ ಕಂಡಿತ್ತು. ಭಾವನ ಅವರು ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಐಎಂಡಿಬಿಯಲ್ಲಿ ಈ ಚಿತ್ರಕ್ಕೆ 7.2 ರೇಟಿಂಗ್ ಇದೆ.
ಕಾಮೆಂಟ್ಗಳು
ಪ್ರಚಲಿತ ಪೋಸ್ಟ್ಗಳು
ನಿಸರ್ಗವೇ ಬಿಡಿಸೋ ಅಚ್ಚರಿಯ ಶಿಲ್ಪ ಈ ಸ್ಟಾಲಕ್ಟೈಟ್, ಸ್ಟಾಲಗ್ಮೈಟ್!
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಮನುಷ್ಯರ ಮುಖ ಹೋಲೋ ಈ ಮೀನಿನ ಹೆಸರು ಬ್ಲಾಬ್ಫಿಶ್ (ಈ ಜಗ-ಸೋಜಿಗ!)
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು











Nice Info.
ಪ್ರತ್ಯುತ್ತರಅಳಿಸಿTabular presentation madi
Thank you. Sure we will try.
ಅಳಿಸಿNice👍🏻
ಪ್ರತ್ಯುತ್ತರಅಳಿಸಿ